ಅರ್ಜುನ್ ಜನ್ಯಗೆ ಮರೆಯಲಾಗದ ಉಡುಗೊರೆ ಕೊಟ್ಟ ಎ.ಆರ್ ರೆಹಮಾನ್ | Filmibeat Kannada

2018-01-12 5

ಸ್ಯಾಂಡಲ್ ವುಡ್ ನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಗೆ ಸಂಗೀತ ನಿರ್ದೇಶಕನಾಗಬೇಕೆಂಬ ಕನಸು ಮೊಳಕೆಯೊಡೆದದ್ದೇ ಆಕಸ್ಮಿಕ. ಅರ್ಜುನ್ ಕುಟುಂಬದಲ್ಲಿ ಸಂಗೀತವನ್ನು ಕಲಿತವರಾಗಲೀ, ಆಸಕ್ತಿಯಿಂದ ಕೇಳುವವರಾಗಲೀ ಇರಲಿಲ್ಲ. ಹೀಗಿರುವಾಗ, ಸಂಗೀತ ನಿರ್ದೇಶಕನಾಗಬೇಕೆಂಬ ಹಂಬಲ ತುಂಬಿದ್ದು 'ರೋಜಾ' ಚಿತ್ರದ ಹಾಡುಗಳು. ಅಲ್ಲಿಂದ ಆರಂಭವಾಗಿದ್ದೇ ಅರ್ಜುನ್ ಜನ್ಯ ಮತ್ತು ಎ.ಆರ್ ರೆಹಮಾನ್ ಅವರ ಸಂಬಂಧ. ತಮ್ಮ ತಂದೆ ಸಾಯುವುದಕ್ಕು ಹಿಂದಿನ ದಿನಗಳಲ್ಲಿ ಎ.ಆರ್ ರೆಹಮಾನ್ ಬಗ್ಗೆ ಹಾಗೂ 'ರೋಜಾ' ಚಿತ್ರದ ಹಾಡುಗಳ ಬಗ್ಗೆ ಹೇಳಿದ್ದರಂತೆ. ಅದೇ ಕೊನೆ ತಂದೆ ಸಾವನ್ನಪ್ಪಿದರು. ಆಗಲೇ ಅರ್ಜುನ್ ಗೆ ತಾನು ರೆಹಮಾನ್ ರಂತೆ ಸಂಗೀತ ನಿರ್ದೇಶಕನಾಗಬೇಕೆಂಬ ಕನಸು ಹುಟ್ಟಿದ್ದು. ಆ ಕನಸು ಈಗ ಬಹುಶಃ ಈಡೇರಿದೆ. ಅರ್ಜುನ್ ಜನ್ಯ ಕನ್ನಡದ ಎ.ಆರ್ ರೆಹಮಾನ್ ಎಂದೇ ಖ್ಯಾತಿಗಳಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ರೆಹಮಾನ್ ಅವರಿಂದ ಜನ್ಯಗೆ ಮರೆಯಲಾಗದ ಉಡುಗೊರೆ ಸಿಕ್ಕಿದೆ.


Arjun janya is no doubt a die hard fan of . Recently Arjun Janya received an Autographed portrait of his Idol and he is really happy about it.

Videos similaires